Sizzlingstar.co.in | Kannada Film Discussion Forum |

Shivu Adda - Discussion Forum
It is currently Sun Sep 05, 2010 9:39 pm

All times are UTC + 5:30 hours




Post new topic Reply to topic  [ 4 posts ] 
Author Message
 Post subject: Seminar on Nudiyarime and kalike by Banavasi Balaga
PostPosted: Mon Feb 08, 2010 9:12 am 
Offline
aDDa Punter
aDDa Punter
User avatar

Joined: Mon Nov 05, 2007 9:52 pm
Posts: 10843
ಏಳಿಗೆಗೆ ಕಲಿಕೆಯು ಮೊದಲನೆಯ ಮೆಟ್ಟಿಲೆಂದೂ, ಆ ಕಲಿಕೆಯು ತಾಯ್ನುಡಿಯಲ್ಲಿದ್ದರೇ ಅತ್ಯುತ್ತಮವೆಂದೂ, ಆದ್ದರಿಂದ ಕನ್ನಡಿಗರ ತಾಯ್ನುಡಿಯಾದ ಕನ್ನಡದ ಸರಿಯಾದ ಅಧ್ಯಯನವಾಗಬೇಕೆಂಬುದೂ, ಆ ಅಧ್ಯಯನದ ಫಲವು ಕನ್ನಡ ಮಾಧ್ಯಮದ ಕಲಿಕೆಯೇರ್ಪಾಡಿನಲ್ಲಿ ಅಳವಡಿಕೆಯಾಗಬೇಕೆಂಬುದೂ ಬನವಾಸಿ ಬಳಗದ ನಿಲುವಾಗಿದೆ.

ಈ ನಿಟ್ಟಿನಲ್ಲಿ ದಿನಾಂಕ 7/2/2010 ರಂದು ಬೆಂಗಳೂರಿನಲ್ಲಿ "ನುಡಿಯರಿಮೆ ಮತ್ತು ಕಲಿಕೆ" ಎಂಬ ವಿಚಾರ ಸಮ್ಮೇಳನವನ್ನು ಬನವಾಸಿ ಬಳಗವು ಹಮ್ಮಿಕೊಂಡಿದೆ. ಈ ಸಮ್ಮೇಳನದಲ್ಲಿ ನುಡಿ ಮತ್ತು ಕಲಿಕೆಯ ತೊಂಬತ್ತಕ್ಕೂ ಹೆಚ್ಚು ಮಂದಿ ತಜ್ಞರು ಭಾಗವಹಿಸಲಿದ್ದಾರೆ. ಸೂಚನೆ: ಈ ಕಾರ್ಯಕ್ರಮ ವಿಶೇಷ ಆಹ್ವಾನಿತರಿಗೆ ಮಾತ್ರ.

ಹಿನ್ನೆಲೆ ಮತ್ತು ಉದ್ದೇಶಗಳು

ಕನ್ನಡದ ನುಡಿಯರಿಮೆಯ (ಭಾಷಾವಿಜ್ಞಾನದ) ಕ್ಷೇತ್ರದಲ್ಲಿ ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಬಹಳ ಮುಖ್ಯವಾದ ಬೆಳವಣಿಗೆಗಳಾಗಿವೆ. ಕನ್ನಡದ ಸ್ವರೂಪದ ಬಗ್ಗೆ ಸಾವಿರಾರು ವರ್ಷಗಳಿಂದ ಬೇರೂರಿದ್ದ ನಂಬಿಕೆಗಳನ್ನು ಅರಿಮೆಯ (ವಿಜ್ಞಾನದ) ಪರೀಕ್ಷೆಗೆ ಒಳಪಡಿಸಿ ಅವುಗಳಲ್ಲಿ ಕೆಲವು ಮುಖ್ಯವಾದ ನಂಬಿಕೆಗಳನ್ನು ನುಡಿಯರಿಗರು (ಭಾಷಾವಿಜ್ಞಾನಿಗಳು) ಕೈಬಿಟ್ಟಿದ್ದಾರೆ. ಈ ಮೂಲಕ ಕನ್ನಡ ನುಡಿಯರಿಮೆಯು ಅರಿಮೆಯ ಬೆಳಕಿನಿಂದ ಕಂಗೊಳಿಸುತ್ತಿರುವ ಹೊಸದೊಂದು ದಿಕ್ಕಿನಲ್ಲಿ ಹರಿದಿದೆ.

ಮುಖ್ಯವಾಗಿ, ಸಂಸ್ಕೃತದ ಸೊಲ್ಲರಿಮೆಯನ್ನು (ವ್ಯಾಕರಣವನ್ನು) ಕನ್ನಡಕ್ಕೆ ಅಳವಡಿಸುವುದು ಅರಿಮೆಯಲ್ಲವೆಂದು (ಅವೈಜ್ಞಾನಿಕವೆಂದು) ಕಂಡುಕೊಂಡ ಸೊಲ್ಲರಿಗರು (ವೈಯಾಕರಣಿಗಳು) ಕನ್ನಡಕ್ಕೆ ಕನ್ನಡದ್ದೇ ಸೊಲ್ಲರಿಮೆಯನ್ನು ಕಟ್ಟುತ್ತಿದ್ದಾರೆ. ಕನ್ನಡದ ಸ್ವರೂಪವನ್ನು ತಿಳಿಸಿಕೊಡುವಲ್ಲಿ ಈ ಹೊಸ ಸೊಲ್ಲರಿಮೆಯು ಹಿಂದಿನ ಸೊಲ್ಲರಿಮೆಗಳಿಗಿಂತ ಹೆಚ್ಚು ಸಮರ್ಪಕವಷ್ಟೇ ಅಲ್ಲ, ಕಲಿಯಲು ಸುಲಭವೂ ಆಗಲಿದೆ.

ಹಾಗೆಯೇ, ಹೊಸ ಪದಗಳನ್ನು ಕಟ್ಟುವಾಗ ಕನ್ನಡಿಗರಿಗೆ ಕಷ್ಟವಾದ ಸಂಸ್ಕೃತದ ಮೊರೆಹೋಗದೆ ಬೇರೆ ದಾರಿಯೇ ಇಲ್ಲವೆಂಬ ನಂಬಿಕೆಯೂ ಅರಿಮೆಯಲ್ಲವೆಂದು ಕಂಡುಕೊಂಡ ನುಡಿಯರಿಗರು ಸಾಮಾನ್ಯ ಕನ್ನಡಿಗರ ನಾಲಿಗೆಯ ಮೇಲೆ ನಲಿದಾಡುತ್ತಿರುವ ಎಲ್ಲರಕನ್ನಡವೇ ಹೊಸ ಪದಗಳ ಗಣಿಯೆಂದು ಗುರುತಿಸಿದ್ದಾರೆ. ಈ ಪದಗಳನ್ನು ಉಲಿಯಲು ಮತ್ತು ಕಲಿಯಲಷ್ಟೇ ಅಲ್ಲ, ಕಟ್ಟುವುದು ಕೂಡ ಸುಲಭವಾಗಿದೆ.

ಹಾಗೆಯೇ, ಕನ್ನಡದ ಇಂದಿನ ಲಿಪಿಯಿಂದ ತಲೆದೋರಿರುವ ಸ್ಪೆಲಿಂಗ್ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ. ಈ ಸ್ಪೆಲಿಂಗ್ ಸಮಸ್ಯೆಯನ್ನು ಬಗೆಹರಿಸಿದರೆ ಬರಹವನ್ನು ಮಕ್ಕಳಿಗೆ ಕಲಿಸುವುದು ಸುಲಭವಾಗುತ್ತದೆಯೆಂದು ಅನೇಕ ನುಡಿಯರಿಗರು ತೀರ್ಮಾನಿಸಿದ್ದಾರೆ.

ನುಡಿಯರಿಮೆಯ ಕ್ಷೇತ್ರದಲ್ಲಿ ಈ ವೈಜ್ಞಾನಿಕ ಬದಲಾವಣೆಗಳಾಗುತ್ತಿದ್ದರೂ ಕನ್ನಡ ಮಾಧ್ಯಮದ ಕಲಿಕೆಯೇರ್ಪಾಡು (ಶಿಕ್ಷಣವ್ಯವಸ್ಥೆ) ಇವುಗಳಿಂದ ಬಹಳ ದೂರವುಳಿದಿದೆ. ಹೀಗಾಗಿ, ಕನ್ನಡದ ಸ್ವರೂಪವನ್ನು ತಿಳಿಸಿಕೊಡುವಾಗ, ವಿಜ್ಞಾನ-ತಂತ್ರಜ್ಞಾನಗಳ ಪದಗಳನ್ನು ಕಟ್ಟುವಾಗ, ಮತ್ತು ಬರಹವನ್ನು ಕಲಿಸುವಾಗ ಶಿಕ್ಷಕರು ಮತ್ತು ಪಠ್ಯಪುಸ್ತಕಗಳನ್ನು ರಚಿಸುವವರು ಇನ್ನೂ ಬಹಳ ಕಷ್ಟವನ್ನು ಅನುಭವಿಸುತ್ತಿದ್ದಾರೆ. ಇದರಿಂದಾಗಿ ಕನ್ನಡ ಮಾಧ್ಯಮದ ಕಲಿಕೆಯೇರ್ಪಾಡು ತನ್ನ ಹರವು ಮತ್ತು ಗುಣಮಟ್ಟಗಳನ್ನು ಹೆಚ್ಚಿಸಿಕೊಳ್ಳಲು ಬಹಳ ತೊಂದರೆಯಾಗಿದೆಯೆಂಬುದು ಅನೇಕ ಕಲಿಕೆಯರಿಗರ (ಶಿಕ್ಷಣತಜ್ಞರ) ಮತ್ತು ನುಡಿಯರಿಗರ ಅನಿಸಿಕೆಯಾಗಿದೆ.

ನುಡಿಯರಿಮೆ ಮತ್ತು ಕಲಿಕೆಯೆಂಬೀ ಎರಡು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರು ಒಗ್ಗೂಡಿ ಈ ವಿಷಯಗಳ ಬಗ್ಗೆ ಚರ್ಚೆಗಳನ್ನು ನಡೆಸಿದರೆ ಪರಿಸ್ಥಿತಿ ಬಹಳ ಸುಧಾರಿಸಬಲ್ಲುದು ಎಂದು ನಾವು ನಂಬಿದ್ದೇವೆ. ಆದ್ದರಿಂದ ಕಲಿಕೆಯರಿಗರು ಮತ್ತು ನುಡಿಯರಿಗರನ್ನು ಒಂದೇ ಸೂರಿನಡಿ ಸೇರಿಸುವುದೇ ಈ ಸಮ್ಮೇಳನದ ಅತಿಮುಖ್ಯವಾದ ಮತ್ತು ಮೊದಲನೆಯ ಉದ್ದೇಶವಾಗಿದೆ. ಹಾಗೆಯೇ ನುಡಿಯರಿಮೆಯ ಸಂಶೋಧನೆಗಳಿಂದ ಯಾವ ಯಾವ ಸತ್ಯಗಳು ಹೊರಬಂದಿವೆ, ಅವುಗಳಲ್ಲಿ ಯಾವ ಸತ್ಯಗಳನ್ನು ಯಾವಾಗ ಕಲಿಕೆಯೇರ್ಪಾಡಿನಲ್ಲಿ ಅಳವಡಿಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಬೇಕಿದೆ. ಹಾಗೆಯೇ, ಕಲಿಕೆಯೇರ್ಪಾಡಿನಲ್ಲಿ ಯಾವ ಬದಲಾವಣೆಗಳು ತುರ್ತಾಗಿ ಆಗಬೇಕು ಮತ್ತವುಗಳಲ್ಲಿ ನುಡಿಯರಿಗರ ಪಾತ್ರವೇನು ಎಂಬುದರ ಬಗ್ಗೆಯೂ ಚರ್ಚೆ ನಡೆಯಬೇಕಿದ್ದು. ಈ ಚರ್ಚೆಗಳ ಮೂಲಕ ನುಡಿಯರಿಗರು ಮತ್ತು ಕಲಿಕೆಯರಿಗರಿಬ್ಬರೂ ಯಾವ ಕೆಲಸಗಳನ್ನು ಆದ್ಯತೆಯಿಂದ ಮಾಡಬೇಕೆಂದು ಕೂಡ ಚರ್ಚೆಯಾಗಬೇಕಿದೆ. ಈ ಚರ್ಚೆಗಳು ನಡೆಯುವಂತೆ ಮಾಡುವುದು ಈ ಸಮ್ಮೇಳನದ ಎರಡನೆಯ ಉದ್ದೇಶವಾಗಿದೆ. ಈ ಚರ್ಚೆಗಳಿಗೆ ಬೀಜವಾಗಿ ನಾಲ್ಕು ಹಿರಿಯ ವಿದ್ವಾಂಸರಿಂದ ಉಪನ್ಯಾಸಗಳನ್ನು ಏರ್ಪಡಿಸಿದ್ದೇವೆ.

ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿರುವ ಉಪನ್ಯಾಸಕರು ಮತ್ತು ಪರಿಶೀಲಕರು:
ಉಪನ್ಯಾಸಕರು

ನಾಡೋಜ ಡಾ. ಡಿ. ಎನ್. ಶಂಕರಭಟ್, ನಿವೃತ್ತ ನುಡಿಯರಿಮೆಯ ಪ್ರೊಫೆಸರ್, ಭಾರತೀಯ ಭಾಷಾ ಸಂಸ್ಥಾನ, ಮೈಸೂರು, ಕರ್ನಾಟಕ.
ಡಾ. ಎನ್. ಎಸ್. ರಘುನಾಥ್, ನಿವೃತ್ತ ಇಂಗ್ಲೀಷ್ ವಿಭಾಗದ ಮುಖ್ಯಸ್ಥರು, ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್, ಮೈಸೂರು, ಕರ್ನಾಟಕ.
ಡಾ. ಕೆ. ವಿ. ನಾರಾಯಣ, ನಿವೃತ್ತ ಕನ್ನಡದ ಪ್ರೊಫೆಸರ್, ಹಂಪಿ ಕನ್ನಡ ವಿಶ್ವವಿದ್ಯಾಲಯ, ಹಂಪಿ, ಕರ್ನಾಟಕ.
ಡಾ. ಎಸ್. ಎನ್. ಶ್ರೀಧರ್, ಪ್ರೊಫೆಸರ್, ನುಡಿಯರಿಮೆ ವಿಭಾಗ, ಸ್ಟೋನಿ ಬ್ರುಕ್ ವಿಶ್ವವಿದ್ಯಾಲಯ, ನ್ಯೂಯಾರ್ಕ್, ಯು.ಎಸ್.ಎ.
ಪರಿಶೀಲಕರು

ಡಾ. ಬಿ. ಪಿ. ಹೇಮಾನಂದ, ಹಿರಿಯ ರಿಸರ್ಚ್ ಫೆಲೊ, ದ್ರಾವಿಡ ಮತ್ತು ಕಂಪ್ಯುಟೇಶನಲ್ ಭಾಷಾವಿಜ್ಞಾನ ವಿಭಾಗ, ದ್ರಾವಿಡ ವಿವಿ, ಕುಪ್ಪಂ, ಆಂಧ್ರಪ್ರದೇಶ.
ಶ್ರೀ ನಿರಂಜನ್ ಉಪ್ಪೂರ್, ನುಡಿಯರಿಮೆ ರಿಸರ್ಚ್ ಫೆಲೋ, ಐ‌ಐಟಿ ಕಾನ್ಪುರ್, ಉತ್ತರ ಪ್ರದೇಶ.
ಡಾ. ವಿ. ಬಿ. ತಾರಕೇಶ್ವರ್, ಪ್ರೊಫೆಸರ್ ಮತ್ತು ಮುಖ್ಯಸ್ಥರು, ಅನುವಾದ ವಿಭಾಗ, ಇಂಗ್ಲೀಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯ, ಹೈದರಾಬಾದ್, ಆಂಧ್ರಪ್ರದೇಶ.
ಡಾ. ಪಾಂಡುರಂಗ ಬಾಬು, ನುಡಿಯರಿಮೆಯ ಪ್ರೊಫೆಸರ್, ಕನ್ನಡ ಭಾಷಾಧ್ಯಯನ ವಿಭಾಗ, ಹಂಪಿ ಕನ್ನಡ ವಿಶ್ವವಿದ್ಯಾಯಯ, ಹಂಪಿ, ಕರ್ನಾಟಕ.
ಶ್ರೀಮತಿ ಪಿ. ಭಾರತೀ ದೇವಿ, ಕನ್ನಡ ಲೆಕ್ಚರರ್, ಸರಕಾರಿ ಮಹಿಳೆಯರ ಪದವಿ ಕಾಲೇಜು, ಮಂಡ್ಯ, ಕರ್ನಾಟಕ.
ಡಾ. ಶಿವರಾಮ್ ಪಡಿಕ್ಕಲ್, ಪ್ರೊಫೆಸರ್, ಸಿ.ಎ.ಎಲ್.ಟಿ.ಎಸ್, ಹೈದರಾಬಾದ್ ವಿಶ್ವವಿದ್ಯಾಲಯ, ಹೈದರಾಬಾದ್, ಆಂಧ್ರಪ್ರದೇಶ.
ಡಾ. ಸಿ. ಎಸ್. ರಾಮಚಂದ್ರ, ನುಡಿಯರಿಮೆಯ ಪ್ರೊಫೆಸರ್, ನುಡಿಯರಿಮೆ ವಿಭಾಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಪ್ರಸಾರಾಂಗದ ನಿರ್ದೇಶಕರು, ಮೈಸೂರು ವಿಶ್ವವಿದ್ಯಾಲಯ, ಮೈಸೂರು, ಕರ್ನಾಟಕ.
ಡಾ. ಪಿ. ಮಹದೇವಯ್ಯ, ನುಡಿಯರಿಮೆಯ ರೀಡರ್, ಹಂಪಿ ಕನ್ನಡ ವಿಶ್ವವಿದ್ಯಾಲಯ, ಹಂಪಿ, ಕರ್ನಾಟಕ.
ಡಾ. ವಿಕ್ರಮ್ ವಿಸಾಜಿ, ಕನ್ನಡ ಲೆಕ್ಚರರ್, ಪದವಿಪೂರ್ವ ಕೇಂದ್ರ, ಗುಲಬರ್ಗ ವಿಶ್ವವಿದ್ಯಾಲಯ, ರಾಯಚೂರು, ಕರ್ನಾಟಕ.
ಶ್ರೀ. ಸಿ. ಪಿ. ನಾಗರಾಜ್, ನಿವೃತ್ತ ಕನ್ನಡ ವಿಭಾಗದ ಮುಖ್ಯಸ್ಥರು, ಕೆ. ಎಂ. ದೊಡ್ಡಿ, ಮಂಡ್ಯ, ಕರ್ನಾಟಕ.
ಡಾ. ಮಹಾಬಲೇಶ್ವರ ರಾವ್, ಪ್ರಾಂಶುಪಾಲರು, ಟಿ‌ಎಂಎ ಪೈ ಶಿಕ್ಷಣ ಕಾಲೇಜು, ಕುಂಜೆಬೆಟ್ಟು, ಉಡುಪಿ, ಕರ್ನಾಟಕ.
ಡಾ. ಡಿ. ಜಗನ್ನಾಥ ರಾವ್, ನಿವೃತ್ತ ನಿರ್ದೇಶಕರು, ಡಿ‌ಎಸ್‌ಇ‌ಆರ್‌ಟಿ, ಬೆಂಗಳೂರು.
ಶ್ರೀ ವಿ. ಪಿ. ನಿರಂಜನ ಆರಾಧ್ಯ, ರೀಡರ್, ನ್ಯಾಶನಲ್ ಲಾ ಕಾಲೇಜ್, ಬೆಂಗಳೂರು.
ಶ್ರೀ. ಎಸ್. ಸಂಪಂಗಿ, ನಿವೃತ್ತ ಡಿ.ಪಿ.ಐ., ಬೆಂಗಳೂರು, ಕರ್ನಾಟಕ.
ಶ್ರೀ. ಟಿ. ಎಂ. ಕುಮಾರ್, ನಿವೃತ್ತ ಡಿ.ಪಿ.ಐ., ಬೆಂಗಳೂರು, ಕರ್ನಾಟಕ.
ಈ ಸಮ್ಮೇಳನವನ್ನು ನಡೆಸಲು ಬಂಡಾರ ಪ್ರಕಾಶನ, ಮಸ್ಕಿ ಮತ್ತು ಆಂಧ್ರಪ್ರದೇಶದ ಕುಪ್ಪಂ-ನ ದ್ರಾವಿಡ ವಿಶ್ವವಿದ್ಯಾಲಯವು ನೆರವು ನೀಡಿದೆಯೆಂದು ನಿಮ್ಮೊಡನೆ ಹಂಚಿಕೊಳ್ಳಲು ಬನವಾಸಿ ಬಳಗ ಸಂತಸ ಪಡುತ್ತದೆ.

_________________
First Legend of KFI, Dr.Rajkumar orphaned us on 12th April, 2006
Last Legend of KFI, Dr.Vishnuvardhan orphaned us on 30th December, 2009

***************
Saahasasimha, Abhinava bhaargava Dr.Vishnuvardhan's Aaptarakshaka has got a fantastic opening. Kudos to the legend..
Lion roars, even after his demise


Top
 Profile  
 
 Post subject: Re: Seminar on Nudiyarime and kalike by Banavasi Balaga
PostPosted: Mon Feb 08, 2010 9:13 am 
Offline
aDDa Punter
aDDa Punter
User avatar

Joined: Mon Nov 05, 2007 9:52 pm
Posts: 10843
Kaaryakramada report

ಯಾವುದೇ ಒಂದು ನಾಡಿನ ಏಳಿಗೆಯಲ್ಲಿ ದುಡಿಮೆಯ ಪಾತ್ರ ಬಲು ಹಿರಿದಾಗಿದ್ದು, ದುಡಿಮೆಗೆ ಕಲಿಕೆಯು ಮೊದಲನೆಯ ಮೆಟ್ಟಿಲೆಂಬುದೂ, ಆ ಕಲಿಕೆಯು ತಾಯ್ನುಡಿಯಲ್ಲಿದ್ದರೇ ಅತ್ಯುತ್ತಮವೆಂಬುದೂ ಜಗತ್ತಿನಾದ್ಯಂತ ಸ್ಥಾಪಿತವಾಗಿರುವ ದಿಟವಾಗಿದೆ. ಆದ್ದರಿಂದ ಕರ್ನಾಟಕದ ಏಳಿಗೆಗೆ ಕನ್ನಡಿಗರ ತಾಯ್ನುಡಿಯಾದ ಕನ್ನಡವೇ ಸರಿಯಾದ ಸಾಧನವೆಂಬುದೂ, ಹಾಗೇ ನಮ್ಮ ಮಕ್ಕಳ ಕಲಿಕೆ ಅತ್ಯುತ್ತಮವಾಗಲು ಅದಕ್ಕೆ ಸಾಧನವಾದ ಕನ್ನಡನುಡಿಯ ಸರಿಯಾದ ಅಧ್ಯಯನವಾಗಬೇಕೆಂಬುದೂ ಮತ್ತು ಆ ಅಧ್ಯಯನದ ಫಲವು ಕನ್ನಡಮಾಧ್ಯಮದ ಕಲಿಕೆಯೇರ್ಪಾಡಿನಲ್ಲಿ ಅಳವಡಿಕೆಯಾಗಬೇಕೆಂಬುದೂ ಬನವಾಸಿ ಬಳಗದ ನಿಲುವಾಗಿದೆ.
ಈ ನಿಟ್ಟಿನಲ್ಲಿ, ಫೆಬ್ರವರಿ 7, 2010ರ ಭಾನುವಾರ ದಂದು ಬನವಾಸಿ ಬಳಗ ಹಮ್ಮಿಕೊಂಡಿದ್ದ "ನುಡಿಯರಿಮೆ ಮತ್ತು ಕಲಿಕೆ" ಎಂಬ ಸಮ್ಮೇಳನಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ನಾಡಿನ ಪ್ರಮುಖ ಭಾಷಾ ವಿಜ್ಞಾನಿಗಳಲ್ಲಿ ಮುಂಚೂಣಿಯಲ್ಲಿರುವ ನಾಡೋಜ ಡಾ. ಡಿ.ಎನ್. ಶಂಕರ್ ಭಟ್, ಡಾ. ಕೆ.ವಿ. ನಾರಾಯಣ ಮತ್ತು ಅಮೇರಿಕದ ನ್ಯೂಯಾರ್ಕದಲ್ಲಿರುವ ಸ್ಟೋನಿಬ್ರೂಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಎಸ್.ಎನ್. ಶ್ರೀಧರ್ ಹಾಗೂ ಹಿರಿಯ ಶಿಕ್ಷಣ ತಜ್ಞ ಡಾ.ಎನ್.ಎಸ್.ರಘುನಾಥ್ ಅವರು ಪಾಲ್ಗೊಂಡು ಉಪನ್ಯಾಸ ನೀಡಿದರು.

ಮೊದಲಿಗೆ "ನುಡಿಯ ಕಲಿಕೆಗೆ ಸೊಲ್ಲರಿಮೆಯ ನೆರವು" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ನಾಡೋಜ ಡಾ. ಡಿ.ಎನ್. ಶಂಕರ್ ಭಟ್ ಅವರು ಕನ್ನಡದಲ್ಲಿ ಬಳಕೆಯಾಗುತ್ತಿರುವ ಪದಗಳು, ಅವುಗಳ ಒಳರಚನೆ, ಅವುಗಳನ್ನು ಜೋಡಿಸಿ ಬಗೆ ಬಗೆಯ ವಾಕ್ಯಗಳನ್ನು ಮಾಡುವ ಪರಿ, ಆ ವಾಕ್ಯಗಳನ್ನು ಬಳಸಿ ಬರಹವನ್ನು ಬರೆಯುವ ಬಗೆ ಹೇಗೆ ಎಂಬುದನ್ನು ತಿಳಿದುಕೊಳ್ಳುವುದೇ ಸೊಲ್ಲರಿಮೆಯ ಮೂಲ ಗುರಿಯಾಗಿದೆ. ಹಾಗಾಗಿ, ನಿಜಕ್ಕೂ ಕನ್ನಡದ ಸೊಲ್ಲರಿಮೆಯ ಸ್ವರೂಪ ಎಂತಹದು ಎಂಬುದರ ಸರಿಯಾದ ಅರಿವು, ಹೇಗೆ ಕನ್ನಡವನ್ನು ಓದಲು ಬರೆಯಲು ಕಲಿಯುವವರಿಗೆ ಮತ್ತು ಇಂಗ್ಲಿಷ್‍ನಂತಹ ಬೇರೆ ನುಡಿಯೊಂದನ್ನು ಕಲಿಯುವವರಿಗೆ ನೆರವನ್ನು ನೀಡಬಲ್ಲದು ಎಂಬುದರ ಬಗ್ಗೆ ವಿವರಿಸಿ ಈ ದಿಕ್ಕಿನಲ್ಲಿ ಇನ್ನೂ ಹೆಚ್ಚಿನ ಕೆಲಸಗಳಾಗಬೇಕು ಎಂದು ನುಡಿದರು.

ಎರಡನೆಯದಾಗಿ "ಕನ್ನಡ ಭಾಷಾ ವಿಜ್ಞಾನ ಮತ್ತು ಕನ್ನಡ ಸಮಾಜ" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಡಾ. ಕೆ.ವಿ. ನಾರಾಯಣ ಅವರು ಕನ್ನಡ ನುಡಿಯರಿಮೆಗೂ, ಕರ್ನಾಟಕದ ಸಮಾಜಕ್ಕೂ ಇರುವ ನಂಟನ್ನು ಕುರಿತು ತಿಳಿಸುವ ಬರವಣಿಗೆಗಳು ಬರಬೇಕಾದ ಅಗತ್ಯದ ಬಗ್ಗೆ, ಕರ್ನಾಟಕದಲ್ಲಿರುವ ಭಾಷೆಗಳ ಮತ್ತು ಭಾಷಿಕರ ನಡುವಣ ಸಂಬಂಧದ ಕುರಿತಂತೆ ನೀತಿಯೊಂದನ್ನು ರೂಪಿಸಬೇಕಾದ ಅಗತ್ಯದ ಬಗ್ಗೆ ಮತ್ತು ಕನ್ನಡ ನುಡಿಯ ಬೆಳವಣಿಗೆಯ ಬಗ್ಗೆ ರೂಪಿಸುವ ಯೋಜನೆಗಳನ್ನು ಹೇಗೆ ಮತ್ತು ಯಾವ ತಳಹದಿಯ ಮೇಲೆ ಕಟ್ಟಬೇಕು ಎಂಬುದರ ಬಗ್ಗೆ ಆಗಬೇಕಾದ ಕೆಲಸಗಳ ಬಗ್ಗೆ ಮಾತನಾಡಿದರು. ಅಷ್ಟೇ ಅಲ್ಲದೇ, ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತಗಳ ನಡುವೆ ಇರುವ ಮತ್ತು ಇರಬೇಕಾದ ನಂಟನ್ನು ಕುರಿತು ಚರ್ಚಿಸಬೇಕಾದ ಅಗತ್ಯವನ್ನು ವಿವರಿಸಿದರು.

ಮೂರನೆಯದಾಗಿ "ಭಾಷಾವಿಜ್ಞಾನ ಮತ್ತು ಶಿಕ್ಷಕರು" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಡಾ. ಎನ್.ಎಸ್. ರಘುನಾಥ್ ಅವರು ಕರ್ನಾಟಕದಲ್ಲಿ ಇಂದಿಗೂ ಬಹುಪಾಲು ಶಿಕ್ಷಕರಲ್ಲಿ ಭಾಷಾ ವಿಜ್ಞಾನ ಎನ್ನುವ ವಿಷಯವೊಂದು ಇರುವುದರ ಮತ್ತು ಅದನ್ನು ತಿಳಿದುಕೊಳ್ಳುವ ಅವಶ್ಯಕತೆ ಇರುವುದರ ಬಗ್ಗೆ ಅರಿವು ತುಂಬಾ ಕಡಿಮೆಯಿದ್ದು, ಭಾಷಾ ವಿಜ್ಞಾನದ ಬಗ್ಗೆ ಇರುವ ತಿರಸ್ಕಾರ ಭಾವನೆಯು, ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸುವಲ್ಲಿ ಹೇಗೆ ತೊಡಕುಂಟು ಮಾಡುತ್ತಿದೆ ಎಂಬುದನ್ನು ವಿವರಿಸಿದರು. ವಾಕ್ಯ ರಚನೆ, ಫೊನೆಟಿಕ್ಸ್ ಮುಂತಾದ ಭಾಷಾ ವಿಜ್ಞಾನದ ಮುಖ್ಯ ಭಾಗಗಳ ಅರಿವು ಭಾಷಾ ಶಿಕ್ಷಕರಿಗೆ ಇದ್ದಲ್ಲಿ, ಮಕ್ಕಳ ಭಾಷಾ ಕಲಿಕೆಯ ಮಟ್ಟದಲ್ಲಿ ಆಗಬಹುದಾದ ಲಾಭದಾಯಕ ಪರಿಣಾಮಗಳ ಬಗ್ಗೆ ವಿವರಿಸಿದರು.

ಕೊನೆಯಲ್ಲಿ "ಕನ್ನಡದ ಬೆಳವಣಿಗೆಗೆ ಭಾಷಾವಿಜ್ಞಾನ ಏಕೆ ಬೇಕು? ಮತ್ತು ಅದನ್ನು ಬೆಳೆಸುವ ಬಗೆ" ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಡಾ. ಎಸ್.ಎನ್. ಶ್ರೀಧರ್ ಅವರು, ಇತರ ಭಾರತೀಯ ಭಾಷೆಗಳಿಗೆ ಹೋಲಿಸಿದರೆ ಕನ್ನಡದ ಭಾಷಾವಿಜ್ಞಾನ ಇನ್ನೂ ಎಳವೆಯಲ್ಲಿರುವುದನ್ನು, ಕನ್ನಡದ ಬೆಳವಣಿಗೆಗೆ ಭಾಷಾವಿಜ್ಞಾನದ ಅವಶ್ಯಕತೆಯಿದೆಯೆನ್ನುವುದೇ ಇಲ್ಲಿಯವರೆಗೆ ಹೆಚ್ಚಿನ ಜನರ ಗಮನಕ್ಕೆ ಬಂದಿಲ್ಲದಂತಿರುವುದು ಇದಕ್ಕೆ ಕಾರಣವೆಂದು ವಿವರಿಸಿದರು. ಭಾಷಾವಿಜ್ಞಾನದಿಂದಲೇ ಕನ್ನಡದ ಸರಿಯಾದ ಸ್ವರೂಪದ ಅರಿವು ನಮಗಾಗಬಲ್ಲುದು ಮತ್ತು ಕನ್ನಡದಿಂದ ಅತಿ ಹೆಚ್ಚಿನ ಲಾಭವನ್ನು ನಾವು ಪಡೆಯಬಲ್ಲೆವು. ಆದ್ದರಿಂದ ಭಾಷಾವಿಜ್ಞಾನವನ್ನು ಒಂದು ಅತಿಮುಖ್ಯವಾದ ವಿಷಯವಾಗಿ ವಿಶ್ವವಿದ್ಯಾಲಯಗಳು ಪರಿಗಣಿಸಿ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಬೋಧನೆಗಳು ನಡೆಯಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಪ್ರತಿ ಉಪನ್ಯಾಸದ ನಂತರ ಆಯಾ ವಿಷಯದ ಬಗ್ಗೆ ಅರ್ಥಪೂರ್ಣ ಚರ್ಚೆಗಳಾದವು. ಭಾರತದ ಹಲವೆಡೆಯಿಂದ ಬಂದಿದ್ದ ಶಿಕ್ಷಣ ಮತ್ತು ಭಾಷಾ ವಿಜ್ಞಾನದ ವಿಷಯ ಪರಿಣಿತರು ಈ ಚರ್ಚೆಗಳಿಗೆ ಹೊಸ ಮೆರುಗು ತಂದರು.

ಇದೇ ಸಂದರ್ಭದಲ್ಲಿ "ಎಲ್ಲರ ಕನ್ನಡ" ಅನ್ನುವ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಲಾಯಿತು. ಇದು ಕನ್ನಡಿಗರೆಲ್ಲರೂ ಬಳಸುವ ಕನ್ನಡದ ಭಾಷಾವಿಜ್ಞಾನ ಮತ್ತು ಕನ್ನಡ ಮಾಧ್ಯಮದ ಶಿಕ್ಷಣವ್ಯವಸ್ಥೆಯನ್ನು ಕುರಿತ ತಾಣವಾಗಿದೆ. ಕನ್ನಡ ಭಾಷಾವಿಜ್ಞಾನದ ಬಗ್ಗೆ ಕನ್ನಡಿಗರಲ್ಲಿ ಆಸಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಇದರಲ್ಲಿ ನಾಡೋಜ ಡಾ. ಡಿ. ಎನ್. ಶಂಕರಭಟ್ಟರ ಕನ್ನಡದ ಹೊತ್ತಗೆಗಳನ್ನೆಲ್ಲ ಉಚಿತವಾಗಿ ಪಿಡಿಎಫ್ ರೂಪದಲ್ಲಿ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಅನೇಕ ನುಡಿಗೆ ಸಂಬಂಧಿತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಾಷಾವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ಕೂಡಿ ಕೆಲಸ ಮಾಡಲು ಮುಂದಾಗಬೇಕಾದ ಅವಶ್ಯಕತೆಯನ್ನು ಇಡೀ ಸಮ್ಮೇಳನ ಅರ್ಥಪೂರ್ಣವಾಗಿ ಒಕ್ಕೊರಲಿನ ಅಭಿಪ್ರಾಯದ ಮೂಲ ಹೊರಹೊಮ್ಮಿಸಿತು.

_________________
First Legend of KFI, Dr.Rajkumar orphaned us on 12th April, 2006
Last Legend of KFI, Dr.Vishnuvardhan orphaned us on 30th December, 2009

***************
Saahasasimha, Abhinava bhaargava Dr.Vishnuvardhan's Aaptarakshaka has got a fantastic opening. Kudos to the legend..
Lion roars, even after his demise


Top
 Profile  
 
 Post subject: Re: Seminar on Nudiyarime and kalike by Banavasi Balaga
PostPosted: Mon Feb 08, 2010 9:14 am 
Offline
aDDa Punter
aDDa Punter
User avatar

Joined: Mon Nov 05, 2007 9:52 pm
Posts: 10843
Source - http://enguru.blogspot.com/

_________________
First Legend of KFI, Dr.Rajkumar orphaned us on 12th April, 2006
Last Legend of KFI, Dr.Vishnuvardhan orphaned us on 30th December, 2009

***************
Saahasasimha, Abhinava bhaargava Dr.Vishnuvardhan's Aaptarakshaka has got a fantastic opening. Kudos to the legend..
Lion roars, even after his demise


Top
 Profile  
 
 Post subject: Re: Seminar on Nudiyarime and kalike by Banavasi Balaga
PostPosted: Mon Feb 08, 2010 9:18 am 
Offline
aDDa Punter
aDDa Punter
User avatar

Joined: Mon Nov 05, 2007 9:52 pm
Posts: 10843
Same article on karnatique blog

At Banavasi Balaga, we believe that education is crucial for development and that mother-tongue is the best medium of instruction. Hence, a correct study of Kannada as a language (the mother-tongue of Kannadigas), as well as the application of the learnings from that study to the Kannada-medium education system are the need of the hour.

Against this backdrop, Banavasi Balaga is organizing a Symposium on Kannada Linguistics and Education on 7/2/2010 in Bengaluru. Please note: This programme is for invitees only.


Background and objectives

In the last couple of decades, Kannada linguistics has undergone important changes. Many deep-rooted beliefs about the nature of Kannada have been subjected to scientific enquiry and a few proven as incorrect. It would not be an exaggeration to say that Kannada linguistics is now proceeding in a new direction – on a path bathed in the bright sunlight of science.

Importantly, grammarians have realized that it is unscientific to tweak the grammar of Sanskrit to try and fit it to Kannada. Instead, grammarians are now seeking to build a true grammar of Kannada. This true grammar of Kannada is not only an accurate-by-far description of Kannada, but also very easy to learn.

Similarly, linguists have now realized the unscientific nature of the now deep-rooted belief that new words can be added to Kannada only by coining them in Sanskrit. Instead, they are now understood the power of Ellarakannada (Everyone’s Kannada) as a source of new words. These words are not only easy to pronounce (for Kannadigas), but also easy to coin.

Also, research is being conducted on ways of improving the Kannada script in order to rid the language of spelling problems. Many linguists believe that a reformed Kannada script would help make teaching it to children easier.

While these scientific changes are happening in the field of Kannada linguistics, the Kannada-medium education system has almost entirely remained aloof from them. Hence, teachers and text-book writers are facing a lot of difficulty in teaching the nature of Kannada, in coining new terms of Science and Technology, as well as in teaching to write Kannada. Many linguists and educationists are of the opinion that these impediments are inhibiting the growth of the coverage and quality of education in the Kannada medium.

We believe that the need of the hour is for people from these two fields – linguistics and education – to come together and discuss ways of improving the status quo. Thus, the first and foremost objective of this Symposium is to arrange for some of the most important people in these two fields to get together under the same roof. Discussions need to happen about the output of research in linguistics and its application to education. Also, discussions need to happen about the changes which need to be made to the Kannada medium education system and the role of linguists therein. These discussions can help set priorities for future work in both fields. To make these discussions happen is the second objective of this Symposium. We have arranged four lectures from senior workers in this field.

Speakers and commentators

Speakers

Nadoja Dr. D. N. Shankar Bhat, Retd. Professor of linguistics, Central Institute of Indian Languages, Mysore, Karnataka.
Dr. N. S. Raghunath, Retd. Head of the Department of English, Regional College of Education, Mysore, Karnataka.
Dr. K. V. Narayana, Retd. Professor of Kannada, Hampi Kannada University, Hampi, Karnataka.
Dr. S. N. Sridhar, Professor of linguistics, Linguistics Department. Stony Brook University, New York, USA.
Commentators

Dr. B. P. Hemananda, Senior Research Fellow, Dept. of Dravidian and Computational Linguistics, Dravidian University, Kuppam, Andhra Pradesh
Dr. Niranjan Uppoor, Research Fellow in Linguistics, IIT Kanpur, Kanpur, Uttar Pradesh
Dr. V. B. Tarakeshwar, Professor and Head, Translations Department, English and Foreign Languages University, Hyderabad, Andhra Pradesh
Dr. Panduranga Babu, Professor of Linguistics, Department of Kannada Language Studies, Hampi Kannada University, Hampi, Karnataka.
Smt. P. Bharati Devi, Kannada lecturer, Govt. Women’s Degree College, Mandya, Karnataka
Dr. Shivaram Padikkal, Professor, CALTS, Hyderabad University, Hyderabad, Andhra Pradesh
Dr. C. S. Ramachandra, Professor of Linguistics, Department of Linguistics, Kuvempu Institute of Kannada Studies, and Director of Prasaranga, Mysore University, Mysore, Karnataka
Dr. P. Mahadevaiah, Reader in Linguistics, Hampi Kannada University, Hampi, Karnataka
Dr. Vikram Visaji, Kannada lecturer, Pre-University Center, Gulbarga University, Raichur, Karnataka
Sri. C. P. Nagaraj, Retd. Head of the department of Kannada, K M Doddi, Mandya, Karnataka
Dr. Mahabaleshwar Rao, Principal, TMA Pai College of Education, Kunjebettu, Udupi, Karnataka
Dr. D. Jagannatha Rao, Retd Director, DSERT, Bengaluru, Karnataka
Sri V. P. Niranjana Aradhya, Reader, National Law College, Bengaluru, Karnataka
Sri S. Sampangi, Retd. Director of Public Instruction, Bengaluru, Karnataka
Sri T. M. Kumar, Retd Director of Public Instruction, Bengaluru, Karnataka
We are happy to announce that the Dravidian University, Kuppam, Andhra Pradesh, as well as Bandara Prakashana, Maski, Karnataka are helping us organize this Symposium.

_________________
First Legend of KFI, Dr.Rajkumar orphaned us on 12th April, 2006
Last Legend of KFI, Dr.Vishnuvardhan orphaned us on 30th December, 2009

***************
Saahasasimha, Abhinava bhaargava Dr.Vishnuvardhan's Aaptarakshaka has got a fantastic opening. Kudos to the legend..
Lion roars, even after his demise


Top
 Profile  
 
Display posts from previous:  Sort by  
Post new topic Reply to topic  [ 4 posts ] 

All times are UTC + 5:30 hours


Who is online

Users browsing this forum: No registered users and 1 guest


You cannot post new topics in this forum
You cannot reply to topics in this forum
You cannot edit your posts in this forum
You cannot delete your posts in this forum

Search for:
Jump to:  
Powered by phpBB © 2000, 2002, 2005, 2007 phpBB Group